ಆಳ್ವಾಸ್ ನುಡಿಸಿರಿ 2018 ರಲ್ಲಿ ITಯಿಂದ ಮೇಟಿಗೆ

ಅಸಾಮಾನ್ಯ ಸಂಘಟಕ ಡಾ| ಆಳ್ವ [ಆಳ್ವಾಸ್ ನುಡಿಸಿರಿ ೨೦೧೮, ನವಂಬರ್ ೧೮ನೇ ತಾರೀಖಿನಂದು ನಾನು ಮಂಡಿಸಿದ ಅನಿಸಿಕೆಗಳು] ಶ್ರೀ ಮುರಳೀಧರ ಉಪಾಧ್ಯ ಅವರ ಕೃಪೆಯಿಂದ ದೊರೆತ ವೀಡಿಯೊ. ಓದುವುದಕ್ಕಿಂತ ಇದು ಹೆಚ್ಚು ಪರಿಣಾಮಕಾರಿ. ಎಲ್ಲರಿಗೂ ನಮಸ್ಕಾರ. ಮೂವತ್ತು ವರ್ಷ ತುಂಬಿದ ಮೇಲೆ ಕೃಷಿ ಕೆಲಸಗಳನ್ನು ಆಸಕ್ತಿಯಿಂದ ಕಲಿತು ಕೃಷಿಕನಾಗಲು ಪ್ರಯತ್ನಿಸುತ್ತಿರುವ ಒಬ್ಬ ಸಾಮಾನ್ಯ ಕೃಷಿಕ ನಾನು. ನಾನು ಬರೆದ ಈ ಪುಸ್ತಕದ ಕಾರಣಕ್ಕೆ ನನ್ನನ್ನು ಇಲ್ಲಿಗೆ ಕರೆಯಲಾಗಿದೆ. ಇಷ್ಟೊಂದು ದೊಡ್ಡ ಸಭೆಯಲ್ಲಿ ಮಂಡನೆಗೆ ಯೋಗ್ಯವಾದ ಏನೋ ಒಂದು ಗಹನತೆ “ಈ ವಿಷಯಕ್ಕೆ ಇದೆ” ಎಂದು ಇಲ್ಲಿನ ಸಂಘಟಕರು ಪರಿಗಣಿಸಿರುವುದಕ್ಕೆ ಹೇಗೆ ಧನ್ಯವಾದ ಸಲ್ಲಿಸಬೇಕೆಂದು ನನಗೆ ತಿಳಿಯದಾಗಿದೆ. ನನಗಿರುವ ಸಮಯವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿ ಕೆಲವು ವಿಷಯಗಳನ್ನು ಹೇಳಲು ಪ್ರಯತ್ನಿಸುತ್ತೇನೆ. ೧) ಮೊದಲನೆಯದಾಗಿ ನನ್ನ ಈಗಿನ ಕೃಷಿಕೆಲಸಗಳು ಹೇಗೆ ನನ್ನ ಸುತ್ತುಮುತ್ತಲೊಂದಿಗೆ ಅಂದರೆ ಪರಿಸರದೊಂದಿಗೆ ನನಗೆ ಇದ್ದೇ ಇರುವ ಅವಿನಾಭಾವ ಸಂಬಂಧವನ್ನು ಸದಾ ಜೀವಂತವಾಗಿಟ್ಟು ಪ್ರಕೃತಿಯೊಂದಿಗೆ ಸೇರಿ ಬದುಕುವ ಸಂಪೂರ್ಣತೆಯನ್ನು ನನಗೆ ಸಾಕಷ್ಟುಮಟ್ಟಿಗೆ ಉಂಟುಮಾಡುತ್ತಿವೆ ಎಂಬುದನ್ನು ಕೆಲವು ಉದಾಹರಣೆಗಳ ಮೂಲಕ ಹೇಳಲು ಪ್ರಯತ್ನಿಸುತ್ತೇನೆ. ೨) ನಾನು ಈ ಹಿಂದೆ ಆ ಅವಕಾಶದಿಂದ ವಂಚಿತನಾಗಿದ್ದುದರ ಬಗ್ಗೆ ಮತ್ತು ನಮ್ಮೆಲ್ಲ ಹೊಸ ಉದ್ಯೋಗಗಳ ಗುರಿ ಮ