ಮುಂದೇ ಬನ್ನೀ, ಎಲ್ಲಾರು ಜೀವನದಲ್ಲಿ, ಮುಂದೇ ಬನ್ನೀ
‘ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರದ ಬಸ್ ಕಂಡಕ್ಟರ್ ಪಾತ್ರದಲ್ಲಿ ‘ಮುಂ ದೇ ಬನ್ನಿ, ಕಮಾನ್ ಕಮಾನ್’ ಹಾಡಿಗೆ ಕಮಲ ಹಾಸನ್ ನಟಿಸಿದ್ದನ್ನು ಟೀವಿಯಲ್ ಲಿ ನೋಡಿದ ನೆನಪು ನಮಗೆಲ್ಲ ಹಸಿರಾಗಿ ದೆ. ‘ಮುಂದೆ ಬರಬೇಕು, ಮೇಲಕ್ಕೇರಬೇಕು’ ಎ ನ್ನುವುದನ್ನೇ ನಾವು ಜೀವನವಿಡೀ ಕೇಳು ತ್ತಿರುತ್ತೇವೆ. ಶಾಲೆಯಲ್ಲಿ ಟೀಚರು ಗಳು, ಮನೆಯಲ್ಲಿತಂದೆತಾಯಿ, ಮೇಲಧಿಕಾ ರಿಗಳು, ಮ್ಯಾನೇಜ್ಮೆಂಟ್ ಗುರುಗಳು ಎ ಲ್ಲರೂ ಅದನ್ನೇ ಹೇಳುವುದಲ್ಲವೆ?
ಮುಂದೆ ಬರಬೇಕೆಂದು, ಮೇಲಕ್ಕೇರಬೇಕೆಂ ದು ಸಸ್ಯರಾಶಿಗೂ ತಿಳಿದಿದೆ. ಅವುಗಳಿ ಗೆ ಹಾಗೆಂದು ಯಾರೂಹೇಳಿಕೊಟ್ಟಿಲ್ಲ. ಆದರೆ ಮೇಲಕ್ಕೇರಬೇಕು ಎಂದು ಅವು ತಾ ವಾಗಿ ಕಲಿತಿವೆ. ಮರಗಳು ಮುಗಿಲೆತ್ ತರಕ್ಕೆ ಎದ್ದು ನಿಂತು, ಮೇಲಕ್ಕೆ ನೋ ಡುವ ನಮ್ಮನ್ನು ಕುಬ್ಜರನ್ನಾಗಿಸುತ್ ತವೆ. ಹಾಗೆ ನಿಂತರಷ್ಟೇ ಹಸಿರೆಲೆಗಳಿ ಗೆ ರವಿಕಿರಣಗಳು ಸೋಕಿ ಅವುಗಳ ಅಡುಗೆ ಮನೆ ಚಾಲೂ ಆಗುತ್ತದೆ. ಬೀಸುವ ಬಿರು ಗಾಳಿಗೂ ಹೆದರದೆ ನಿಲ್ಲಲು ಅವು ತಮ್ಮ ಕಂಭದಂಥ ಕಾಂಡವನ್ನು ಕಲ್ಲಿನಂತೆ ಗಡು ಸಾಗಿಸಿವೆ. ಆದರೆ ಬಳ್ಳಿಗಳು? ಅವು ಬ ಳುಕುವಂಥವು! ಅವು ಹೇಗೆ ತಾನೆ ಈ ಕಾಂ ಪಿಟೇಶನ್ನಲ್ಲಿ ಗೆದ್ದಾವು? ಮೇಲಕ್ಕೇ ರಿ ಜೀವನದಲ್ಲಿ ಮುಂದೆ ಬಂದಾವು?
ಆದರೆ ಬಳ್ಳಿಗಳೂ ಕಲಿತಿವೆ! ಬೇರೆ ಬೇ ರೆ ರೀತಿ ಹತ್ತಲು, ತಮ್ಮನ್ನೆತ್ತಿ ಮೇ ಲಕ್ಕೇರಲು! ಮುಳ್ಳುಸೌತೆ, ಹಾಗಲ, ಬೂ ದುಗುಂಬಳದಂಥವು ಸ್ಪ್ರಿಂಗಿನಂಥ ಸುತ್ ತುಬಳ್ಳಿಗಳನ್ನು(tendril) ಅಲ್ಲಲ್ಲಿ ಬಿಡುತ್ತವೆ. ಹೊರಬಂದ ಮೊದಲಿಗೆ ಸು ಮಾರಾಗಿ ನೇರವಾಗಿರುವ ಈ ಸ್ಪ್ರಿಂಗು ಬಳ್ಳಿಗಳು ತಮ್ಮ ಸುತ್ತುಮುತ್ತಲೂ ಆಧಾ ರವೊಂದಿದೆಯೇ ಎಂದುತಡಕಾಡುತ್ತ ಬೆಳೆ ಯುತ್ತವೆ. ಕಡ್ಡಿಯೋ, ಗೂಟವೋ ಸಿಕ್ಕಿ ದ ತಕ್ಷಣ ಅದಕ್ಕೆ ಸುರುಳಿಸುತ್ತಿ ಗಿ ಡವನ್ನುಹತ್ತಿರಕ್ಕೆಳೆಯಲು ಪ್ರಯತ್ನಿ ಸುತ್ತವೆ. ಈ ಸ್ಪ್ರಿಂಗು, ಗಿಡದ ತನಕ ಸುರುಳಿ ಸುತ್ತಿದರೆ ಕಾಂಡವನ್ನು ಹಿಂ ಡಿದಂತಾಗುತ್ತದೆಂದು ಅವೊಂದು ಉಪಾಯ ಹೂ ಡುತ್ತವೆ. ಅರ್ಧದವರೆಗೆ ಆ ಬದಿಗೆ ತಿ ರುಪಿ, ಅರ್ಧದಿಂದೀಚೆಗೆ ಈ ಬದಿಗೆ ತಿ ರುಪಿ ಗಿಡಕ್ಕೆ ತಿರುಪಣೆ ಹಿಂಸೆಯಾ ಗದಂತೆ ಅವು ಕಾಳಜಿವಹಿಸುತ್ತವೆ [ಮೂಲ ಆಕರ ಈ ಗಾರ್ಡಿಯನ್ ಪತ್ರಿಕೆಯ ಲೇಖನ]. ಎಂಥ ಬುದ್ಧಿಶಕ್ತಿ ಅವಕ್ಕೆ. ತಲೆಯೇ ಇಲ್ಲದೆ ತೋರುವ ಬುದ್ಧಿಮತ್ತೆ! ಈ ಸುತ್ತುವ ಅಂಗದಲ್ಲಿ ಎಷ್ಟೊಂದು ಬಗೆ! ಮದು ಮಗಳಮಲ್ಲಿಗೆ(Clematis) ಎಂಬ ಬಳ್ಳಿ ಯಲ್ಲಿ ಎಲೆಯ ತೊಟ್ಟೇ ಆಧಾರದ ಸುತ್ತ ತಿರುಪಿಕೊಳ್ಳಬಲ್ಲುದು. ಅಗ್ನಿಶಿಖೆ( Gloriosa superba) ಬಳ್ಳಿಯಲ್ಲಿ ಎಲೆಯು ಸಪೂ ರವಾಗಿ ನೀಳವಾಗಿದ್ದು ಎಲೆತುದಿಯೇ ಸು ರುಳಿಸುತ್ತುವ ಅಂಗ. ‘ಬೆಕ್ಕಿನ ಉಗುರು ಬಳ್ಳಿ’ ಎಂಬುದು ಮೂ ರು ಉಗುರುಗಳಂತಿರುವ ಚಿಕ್ಕ ಕೈಗಳಿಂದ ಗೋಡೆ, ಮರಗಳನ್ನು ಅಮುಕಿ ಹಿಡಿದು ಏ ರಬಲ್ಲುದು. ಮುಳ್ಳುಬಳ್ಳಿಗಳಿಗೆ ಅವು ಗಳ ಮುಳ್ಳು ರಕ್ಷಣೆಗೂ ಸೈ, ಚುಚ್ಚಿಮೇ ಲಕ್ಕೇರಲೂ ಜೈ!
![]() |
Petrea volubilis ಗಿರಿಗಿಟ್ಲೆ ಮರಬಳ್ಳಿ |
ಮರದಂತೆ ಬೆಳೆಯುವ ಅದೆಷ್ಟೋ ಬಳ್ಳಿ ಗಳಿಗೆ ಇಂಥ ಸುತ್ತುಬಳ್ಳಿಗಳಿಲ್ಲ. ಅ ವು ಬೆಳೆಯುತ್ತಾ, ಹೆಬ್ಬಾವಿನಂತೆ ಇತ ರೆ ಬಲಾಢ್ಯ ಮರಗಳನ್ನು DNA ರಚನೆಯಂ ತೆ ತಿರುವಿ ಅಪ್ಪಿ ಹಿಡಿಯುತ್ತ ಏರು ತ್ತವೆ; ಬೆಳೆದಂತೆ, ತಾವೇ ಮರದಂತೆ ದ ಪ್ಪನಾಗಿ ತಮ್ಮ ಆಶ್ರಯದಾತ ಮರದ ಕೊ ರಳು ಹಿಸುಕಿದಂತೆ ಹಿಂಡಿ ಹಿಪ್ಪೆ ಮಾ ಡಿಬಿಡುತ್ತವೆ. ಅಂಥ ಬಳ್ಳಿಗಳು ಕಾಡಿ ನ ಮೇಲ್ಮೈ ಚಪ್ಪರದಲ್ಲಿ ಒಂದೆರಡು ಎಕ ರೆ ವಿಸ್ತಾರಕ್ಕೆ ಹರಡಿರುತ್ತವೆ! ಇದ ಕ್ಕಿಂತ ಭಿನ್ನವಾಗಿ, ನಮಗೆ ಪರಿಚಿ ತವೇ ಆದ ಕರಿಮೆಣಸು ಮತ್ತು ವೀಳ್ಯದೆ ಲೆ ಬಳ್ಳಿಗಳು ಮರ ಅಥವಾ ಚಪ್ಪರವೇರು ವಾಗ ಗಂಟುಗಂಟುಗಳಲ್ಲಿ ಸ್ವಲ್ಪವೇ ಒಣ ಬೇರುಗಳನ್ನು ಬಿಟ್ಟು ಮರವನ್ನು ಬಿ ಗಿದಪ್ಪುವ ಪರಿ ಚೆನ್ನ; ಅಪ್ಪಿಕೊಳ್ ಳಲಷ್ಟೇ ಇರುವ ಬೇರು ಅದು. ಬಿದಿರಿ ನಲ್ಲೂ ಬಳ್ಳಿಯಂತೆ ಬೆಳೆಯುವ ಬಿದಿರು ಇದೆ ಎಂದು ಬಹುಜನರಿಗೆ ತಿಳಿದಿಲ್ಲ. ಇದು ಮೈಗೆ ತಗುಲಿದರೆ ಮೈತುರಿಸಲು ಶು ರುವಾಗುತ್ತದೆ. ಬೊಂಬಿನಲ್ಲಿ ಇರುವ ಸೂ ಕ್ಷ್ಮ ಹಿಮ್ಮುಖ ಕೂದಲಿನಂತಹ ರಚನೆಯಿಂ ದ ಇದು ಮರಗಳನ್ನು ಆಧರಿಸಿ ಮೇಲೇರುತ್ ತದೆ; ಅದರಿಂದಲೇ ನಮ್ಮ ಮೈಗೆ ನವೆ. ಬೆ ತ್ತದ ಬಳ್ಳಿಯಿಂದ ಬೆತ್ತದ ಸೋಫಾ, ಕು ರ್ಚಿ ಇತ್ಯಾದಿಗಳನ್ನು ತಯಾರಿಸುತ್ತಾ ರಷ್ಟೆ? ಈ ಕಾಡಿನ ಬೆತ್ತದ ಗಿಡವು ಮೇ ಲೇರುವ ಬಗೆಯಂತೂ ಇನ್ನೂಅದ್ಭುತ. ಅಡಿ ಕೆ ಎಲೆಯಂಥ ಅದರ ಎಲೆಯ ತುದಿಯಲ್ಲಿ ಒಂ ದೆರಡು ಮೀಟರ್ ಉದ್ದನೆಯ ಭಯಂಕರ ಚುಚ್ ಚುವ ಗಟ್ಟಿ ಮುಳ್ಳಿನ ಚಾಟಿಯಿಂದ ಅದು ಕಾಡಿನ ಬೇರೆ ಮರಗಳನ್ನು ಆತು ಆಕಾ ಶಕ್ಕೇರುವುದು ವಿಕಾಸದ ಒಂದು ವಿಸ್ಮಯ . ಉಕ್ಕಿನಂಥ ಈ ಮುಳ್ಳುಬಳ್ಳಿಗಳನ್ನು ಕತ್ತರಿಸಿ, ಮುಳ್ಳನ್ನು ಹರುಬಿ ತೆ ಗೆದು, ಸಿಗುವ ನಾರಿನಿಂದ ಬುಟ್ಟಿಹೆ ಣೆಯುವ ಕಲೆ ಹಿಂದೆ ಜನಪದದಲ್ಲಿತ್ತು. ತೂಣ ಗೆಣಸಿನ ಬಳ್ಳಿಯ (Dioscorea) ಕಾಂಡಕ್ಕೆ ನಾಲ್ಕುಮುಖಗಳಿದ್ದು ಅದರ ಒರಟುತನದಿಂದ ಮರಗಳನ್ನು ಆನಿಸಿ ಬೆ ಳೆಯಬಲ್ಲುದು. ಹೀಗೆ ಹತ್ತದೆ ಬೆಳೆ ಯಲು ಬೇರೆದಾರಿಯಿಲ್ಲದ ಬಳ್ಳಿಗಿ ಡಗಳಲ್ಲಿ ನೋಡಿದಷ್ಟು ಬಗೆಬಗೆ.
‘ಬಳುಕುವುದು’ ಎಲ್ಲ ಬಳ್ಳಿಗಳಲ್ಲಿ ಸ ಮಾನವಾಗಿರುವ ಗುಣ. ಮರದಂತೆ ಬೆಳೆಯುವ ಬಳ್ಳಿಗಳೂ ತಮ್ಮ ಎಳವೆಯಲ್ಲಿ ಬಳುಕುತ್ತಲೇ ಬೆಳೆಯುತ್ತವೆ. ಬಳುಕಿ ಕೆಳಗೆ ಬೀ ಳುವುದೇ ನಮ್ಮ ಹಣೆಬರಹವೆಂದು ಅವು ತೆ ಪ್ಪಗಿದ್ದಿದ್ದರೆ ಅವು ನೆಲದಲ್ಲೇ ಉಳಿ ದು ಬೆಳಕು ಪಡೆಯಲಾರದೆ ಅದೆಂದೋ ಅಳಿ ದೇ ಹೋಗುತ್ತಿದ್ದವು. ಆದರೆ ನಿಸರ್ಗದ ಪ್ರತಿಯೊಂದು ಜೀವಿಯು ತನ್ನ ಉಳಿಕೆ ಗಾಗಿ ನಡೆಸುವ ಹೋರಾಟದಲ್ಲಿ ಬೇರೆ ಬೇ ರೆ ಶಕ್ತಿಯನ್ನು ಪಡೆದು ಗಟ್ಟಿಯಾಗು ತ್ತಾ ಹೋಗುತ್ತದೆ, ತಲೆಮಾರಿನಿಂದ ತಲೆ ಮಾರಿಗೆ. ಕೋಟ್ಯಂತರ ವರ್ಷಗಳಲ್ಲಿ ಬಹು ನಿಧಾನವಾಗಿ ನಡೆಯುವ ಈ ಬದಲಾವಣೆ ನಮ್ ಮ ಕಣ್ಣೆದುರೇ ನಡೆಯುತ್ತಿದ್ದರೂ ನಾ ವು ಅದನ್ನುಗಮನಿಸಲಾರೆವು. ಆದರೆ ಈ ವಿ ಸ್ಮಯದ ಪರಿಣಾಮ ನಮ್ಮ ಕಣ್ಣೆದುರಿಗಿ ದೆ. ಮನುಷ್ಯರಾದ ನಾವೂ ಮೇಲೇರುವ ಬಳ್ಳಿಗಳಂತೆ ಇತರರೊಂದಿಗೆ ಸ್ಪರ್ಧಿಸಬೇ ಕಾಗಿದೆ. ಆದರೆ ಅವುಗಳಂತೆ ಮೌನವಾಗಿ, ನಮ್ಮ ‘ಆಧಾರದಾತ’ರಿಗೆ ಸಾಧ್ಯವಾದಷ್ಟು ತೊಂದರೆ ಕಡಿಮೆಯೆನಿಸುವಂತೆ - ಎನ್ನುವ ಪಾಠವನ್ನು ಅವು ನಮ ಗೆ ಕಲಿಸುತ್ತಿವೆ.
Comments
Post a comment