ಸಸ್ಯಶಾಸ್ತ್ರವನ್ನು ಆಸಕ್ತಿಯಿಂದ ಓದುವುದಿದ್ದರೆ ಇಲ್ಲಿಂದ ಮೊದಲು ಮಾಡಿ!

ನನ್ನ ಹಿರಿಯ ಸ್ನೇಹಿತರಲ್ಲೊಬ್ಬರು ಕರಿಂಗಾಣ ಕಾಮತ್ ಡಾಕ್ಟ್ರು . ಅವರೊಬ್ಬರು ಇತಿಹಾಸಕಾರ , ಜೀವಿಶಾಸ್ತ್ರಜ್ಞ , ದೈವದೇವಾರಾಧನೆಗಳನ್ನು ಅಥೆಂಟಿಕ್ ಆಗಿ ವಿಶ್ಲೇಷಿಸಬಲ್ಲ ಜನಪದ , ಸಂಸ್ಕೃತ ಶಾಸ್ತ್ರಜ್ಞ , ಇನ್ನೂ ಏನೇನೋ . ಅವರ ಮನೆಯಲ್ಲಿ ಸುಮಾರು ೧೯೨೦ರ ಆಸುಪಾಸಿನಲ್ಲಿ ( ಇಸವಿ ಅವರಿಗೆ ತಿಳಿದಿದೆ ) ಹಾಸಿದ ಬಾಸೆಲ್ ಮಿಷನ್ ನೆಲಹಾಸು ಟೈಲ್ಸ್ ಇದೆ . ‘ ಬಾಸೆಲ್ ಮಿಷನ್ ’ ಅವರಿಗೆ ತಿಳಿದಂತೆ ೪ ಆವಿಷ್ಕಾರಗಳನ್ನು ಜಗತ್ತಿಗೆ ಕೊಟ್ಟಿದೆ ( ಇವಲ್ಲದೆ ಬೇರೆ ಇದ್ದರೂ ಇರಬಹುದು ). ಟೈಲ್ಸ್ , ಖಾಕಿ ಬಟ್ಟೆ , ಆಗಿನ ಕಾಲದ ಪ್ರಿಂಟಿಗ್ ಟೆಕ್ನಾಲಜಿಯಲ್ಲಿ ಮಹತ್ವದ್ದಾಗಿದ್ದ ( ಮುಖ್ಯವಾಗಿ ಸಸ್ಯಗಳ ) ಆಕರ್ಷಕ ಕೈ ವರ್ಣಚಿತ್ರಗಳ ಪ್ರಿಂಟ್ ತೆಗೆಯುವ ಯಾವುದೋ ಒಂದು ವಿಶಿಷ್ಟ ವಿಧಾನ , ನಾಲ್ಕನೆಯದು ಬಹುಶ : ಕಾಫಿಯ ಸಂಸ್ಕರಣೆ ಇರಬೇಕು . ಇವುಗಳಲ್ಲಿ ಸಸ್ಯಗಳ ನಿಖರ ಚಿತ್ರ ಬಿಡಿಸಿ ಜರ್ಮನ್ ಸಸ್ಯಶಾಸ್ತ್ರಜ್ಞರು ಮಾಡಿದ ಸಸ್ಯಶಾಸ್ತ್ರ ವಿವರಣೆಗಳು ಆಸಕ್ತರಿಗೆ ಭಗವದ್ಗೀತೆಯಂತಿವೆ . ಸಸ್ಯಾಸಕ್ತರು ಓದಲೇ ಬೇಕಾದ ಮೊದಲ ಪುಸ್ತಕ ಬಾಸೆಲ್ ಮಿಷನ್ ಗೆ ನಾವು ಸಸ್ಯಾಸಕ್ತರು ವಿಶೇಷವಾಗಿ ಕೃತಜ್ಞರಾಗಿದ್ದೇವೆ . ಸಸ್ಯಶಾಸ್ತ್ರವನ್ನು ಆಸಕ್ತಿಯಿಂದ ಓದುವವರಿಗೆ ನಾನು ಸಲಹೆಕೊಡುವ ಮೊದಲ ಪುಸ್ತಕ ‘ Glimpses into the Life of Indian Plants : An