Posts

Showing posts from 2017

In memory of BGL Swamy - Plant diversity in a poster

Image
Kaje vrukshalaya, along with DVG baLaga, mangaluru had the privilege of hosting a half day event in memory of a great botanist, linguist, historian and writer Dr. B.G.L swamy. Swamy being the son of prophetic writer D.V.Gundappa may be just a co-incidence or may be not. 2017 happens to be BGL’s birth centenary. Plant diversity extends to millions of different species. I tried making a collage of different parts of various, nearly unrelated species in a collage. This is rather to depict the huge diversity in plants and their growth, survival techniques. This poster is more to show the un-shown than the shown; to say the unsaid, since it is impossible for anyone to show everything. However, I couldn’t explain the poster enough in the event since we had the field visit as our main program that day. I would just like to list the items of the collage in this post for my own memory and for the reference of those who attended the event that day and other readers, if any. The

ಮುಂದೇ ಬನ್ನೀ, ಎಲ್ಲಾರು ಜೀವನದಲ್ಲಿ, ಮುಂದೇ ಬನ್ನೀ

Image
‘ ಬೆಂಕಿಯಲ್ಲಿ   ಅರಳಿದ   ಹೂವು ’  ಚಿತ್ರದ   ಬಸ್   ಕಂಡಕ್ಟರ್   ಪಾತ್ರದಲ್ಲಿ  ‘ ಮುಂ ದೇ   ಬನ್ನಿ ,  ಕಮಾನ್   ಕಮಾನ್ ’  ಹಾಡಿಗೆ  ಕಮಲ   ಹಾಸನ್   ನಟಿಸಿದ್ದನ್ನು   ಟೀವಿಯಲ್ ಲಿ   ನೋಡಿದ   ನೆನಪು   ನಮಗೆಲ್ಲ   ಹಸಿರಾಗಿ ದೆ . ‘ ಮುಂದೆ   ಬರಬೇಕು ,  ಮೇಲಕ್ಕೇರಬೇಕು ’  ಎ ನ್ನುವುದನ್ನೇ   ನಾವು   ಜೀವನವಿಡೀ   ಕೇಳು ತ್ತಿರುತ್ತೇವೆ .  ಶಾಲೆಯಲ್ಲಿ   ಟೀಚರು ಗಳು ,  ಮನೆಯಲ್ಲಿ ತಂದೆತಾಯಿ ,  ಮೇಲಧಿಕಾ ರಿಗಳು ,  ಮ್ಯಾನೇಜ್ಮೆಂಟ್   ಗುರುಗಳು   ಎ ಲ್ಲರೂ   ಅದನ್ನೇ   ಹೇಳುವುದಲ್ಲವೆ ?  ಮುಂದೆ   ಬರಬೇಕೆಂದು ,  ಮೇಲಕ್ಕೇರಬೇಕೆಂ ದು   ಸಸ್ಯರಾಶಿಗೂ   ತಿಳಿದಿದೆ .  ಅವುಗಳಿ ಗೆ   ಹಾಗೆಂದು   ಯಾರೂ ಹೇಳಿಕೊಟ್ಟಿಲ್ಲ .  ಆದರೆ   ಮೇಲಕ್ಕೇರಬೇಕು   ಎಂದು   ಅವು   ತಾ ವಾಗಿ   ಕಲಿತಿವೆ .  ಮರಗಳು   ಮುಗಿಲೆತ್ ತರಕ್ಕೆ   ಎದ್ದು   ನಿಂತು,  ಮೇಲಕ್ಕೆ   ನೋ ಡುವ   ನಮ್ಮನ್ನು   ಕುಬ್ಜರನ್ನಾಗಿಸುತ್ ತವೆ .  ಹಾಗೆ   ನಿಂತರಷ್ಟೇ   ಹಸಿರೆಲೆಗಳಿ ಗೆ   ರವಿಕಿರಣಗಳು   ಸೋಕಿ  ಅವುಗಳ   ಅಡುಗೆ ಮನೆ   ಚಾಲೂ   ಆಗುತ್ತದೆ .  ಬೀಸುವ   ಬಿರು ಗಾಳಿಗೂ   ಹೆದರದೆ   ನಿಲ್ಲಲು   ಅವು   ತಮ್ಮ   ಕಂಭದಂಥ  ಕಾಂಡವನ್ನು   ಕಲ್ಲಿನಂತೆ   ಗಡು ಸಾಗಿಸಿವೆ .  ಆದರೆ   ಬಳ್ಳಿಗಳು ?  ಅವು   ಬ ಳುಕುವಂಥವು !  ಅವು   ಹೇಗೆ   ತಾನೆ   ಈ  ಕಾಂ ಪಿಟೇಶನ್ನಲ್ಲಿ   ಗೆದ್ದಾವು ?  ಮೇಲಕ್ಕೇ ರಿ   ಜೀವನದಲ್ಲಿ   ಮುಂದೆ

ಹಳದಿ ಚಿಟ್ಟೆಯ ಪ್ರಸವ ದರ್ಶನ

Image
ಅವಕಾಶಗಳು   ಕಾಲಿಗೆ   ತೊಡರುವುದು   ಎಂದೊಂದಿದೆಯಲ್ಲ .  ಅಂಥದ್ದೊಂದು   ಇಂದು   ನನಗೆ   ಆಯಿತು .  ನಮ್ಮ   ಮನೆಯ   ಜಗಲಿಯ   ಬದಿಯೇ   ಕಾಡುಹುಣಸೆ   ಬೋನ್ಸೈಗಿಡದ ಮೇಲೆ,   ಚಿಟ್ಟೆಯೊಂದು(common grass yellow butterfly - Eurema hecabe)   ಕೋಶದಿಂದ   ಹೊರಬರುವುದನ್ನು   ನೋಡುವ   ಸುವರ್ಣಾವಕಾಶ   ಅದು !  ಸಣ್ಣ   ವಯಸ್ಸಿನಿಂದ   ಪಾಠದಲ್ಲಿ   ಓದಿದ್ದ ,  ನಾನೆಂದೂ   ಕಣ್ಣಾರೆ   ಕಂಡಿರದ   ವಿಷಯ .  ಅಕ್ಷರಶ: ಸುವರ್ಣಾವಕಾಶ ,  ಏಕೆಂದರೆ   ಅದೇ   ಬಂಗಾರದ   ಬಣ್ಣ!   ಹಚ್ಚ   ಹಸಿರಿನ   ಹುಳವೊಂದು ,  ಹಚ್ಚ   ಹಸಿರಿನ   ಎಲೆಯನ್ನು ಕಬಳಿಸಿ, ಕೋಶ ಕಟ್ಟಿದ ಮೇಲೆ ಹೊನ್ನಬಣ್ಣ ಪಡೆಯುವುದೆಂದರೆ!! ವಿಸ್ಮಯವೆಂದು ನಾವಂದರೆ ಅದು ವಿಸ್ಮಯ, ಸಾಮಾನ್ಯವೆಂದಂದರೆ ಅತಿ ಸಾಮಾನ್ಯ - ಪ್ರಕೃತಿಯೆಂಬ ದೊಡ್ಡ ವಾಹನದಲ್ಲಿ ಸಣ್ಣ ಕೈಗಡಿಯಾರದೊಳಗಿನ ಗಾಲಿಯಂಥ ಹಲ್ಲುಚಕ್ರವೊಂದು ಒಂದು ಸುತ್ತು ತಿರುಗಿದಂತೆ, ಏನೇನೂ ಅಲ್ಲ. ಹಸುರು ಕೋಶದೊಳಗೆ ಹಳದಿ ಚಿಟ್ಟೆ, ಹಿನ್ನೆಲೆಯಲ್ಲಿ ಲಾರ್ವ (ಚಿಟ್ಟೆ ಕೋಶದಿಂದ ಹೊರಬರುತ್ತಿರುವ ವೀಡಿಯೋ) ದೇವರೋ   ಪ್ರಕೃತಿಯೋ ,  ಯಾವುದೆಂದು   ತಿಳಿಯದೊಂದು   ಶಕ್ತಿಯು   ಸಂತತವಾದ ,  ಕೊನೆಮೊದಲಿಲ್ಲದ ,  ಸಕಲ   ಜೀವರಾಶಿಗಳ   ಚಕ್ರವನ್ನು   ನಡೆಸುತ್ತಾ   ಬಂದಿದೆಯಷ್ಟೆ ?  ಒಬ್ಬನೇ   ಕುಳಿತು ಈ ‌ ಕೆಲಸವನ್ನು   ಮಾಡುವುದು   ಆಗುವ   ಹೋಗುವ   ಮಾತಲ್ಲವೆಂದು   ಆ   ಶಕ್ತಿಯು  

ವೆಂಕಟ್ರಾಮ ದೈತೋಟ - ಕೆಲವು ನೆನಪುಗಳು

Image
ವೆಂಕಟ್ರಾಮ ದೈತೋಟ - ಕೆಲವು ನೆನಪುಗಳು ಅವರ ಮದ್ದಿನ ಚೀಟಿಯ ಮಾದರಿ - ಅವರದೇ ಹಸ್ತಾಕ್ಷರ ದೈತೋಟರ ಬಗ್ಗೆ ವಿಸ್ತಾರವಾಗಿ ಬರೆಯಬಲ್ಲಷ್ಟು ಒಡನಾಟ , ಆತ್ಮೀಯತೆ ನನಗಿರಲಿಲ್ಲ . ಆದರೆ ನೋಡಿದಷ್ಟು ಸಂದರ್ಭದಲ್ಲಿ ಅವರು ಬಹಳಷ್ಟರಂತೆ ಕಂಡರು .  ನಾವೊಮ್ಮೆ ಗಡ್ಡೆ ವೈವಿಧ್ಯಗಳ ಬಗ್ಗೆ ಹಲಸು ಸ್ನೇಹಿ ಕೂಟದ ವತಿಯಿಂದ ನಮ್ಮಲ್ಲೊಂದು ಕಾರ್ಯಕ್ರಮ ಮಾಡುವುದೆಂದು ನಿಶ್ಚಯಿಸಿದಾಗ ಶ್ರೀಮತಿ ಮತ್ತು ಶ್ರೀ ದೈತೋಟರನ್ನು ಪ್ರಧಾನ ಭಾಷಣಕಾರರಾಗಿ ಬರಹೇಳುವುದೆಂದು ನಿರ್ಧರಿದೆವು . ನಾಕಾರಂತರು ಅಥವಾ ಶರ್ಮಣ್ಣ ಇಬ್ಬರಲ್ಲೊಬ್ಬರ ಸಲಹೆ ಅದಾಗಿರಬಹುದು . ಕಾರಂತರು , ಶಿರಂಕಲ್ಲು ನಾರಾಯಣಣ್ಣ ಮತ್ತು ನಾನು ಜೊತೆಯಾಗಿ ಹೋಗಿ ಅವರನ್ನು ಕರೆದೆವು .  ಕಾಟುಕುಕ್ಕೆ ಬದಿಯಿಂದ ಅವರಲ್ಲಿಗೆ ಹೋಗುವುದಿದ್ದರೆ ಗುಡ್ಡದ ಅರ್ಧಕ್ಕೆ ಸಾಗುವ ಡಾಂಬರು ರಸ್ತೆಯಿಂದ ಬಲಕ್ಕೆ ನೋಡಿದರೆ ದೂರದಲ್ಲಿ ‘ ಬಳ್ಳಿ ಮಂದಾರ ’ (bauhinia pheonicia) ಎಂಬ ಮರಬಳ್ಳಿ ಎತ್ತರಕ್ಕೆ ಹಬ್ಬಿರುವ ತೋಟವೊಂದು ಕಾಣಿಸುವುದು ಅವರ ಮನೆಯ ಜಿಪಿಯಸ್ ಲೊಕೇಶನ್ . ಸಣ್ಣ ಆಶ್ರಮದಂತಹ ಮನೆ . ಮನೆಗೆ ಆಗ ರಸ್ತೆಯಿರಲಿಲ್ಲ , ಬರೀ ಕಾಡುದಾರಿ . ಆಚೀಚೆ ಕಡೆ ಎಲ್ - ಕೂಟಿ (litsea glutinosa,  ಎಲುಬು ಮುರಿತಕ್ಕೆ ಜೋಡಕ ಅಂಟು ಲೋಳೆ ಕೊಡುವ ಗಿಡ ) ಯಂತಹ ಹಲವಾರು  ಮಲೆನಾಡ  ಔಷಧೀಯ ಗಿ