Posts

Showing posts from October, 2016

ನೀರಿನ ಕೆಲಸ ನಮ್ಮ ಕರ್ತವ್ಯ

Image
ನೀರಿನ ಕೆಲಸ ನಮ್ಮ ಕರ್ತವ್ಯ ನಮಗೆ ಸದ್ಯಕ್ಕೆ ನೀರಿಗೆ ಸಮಸ್ಯೆಯಿಲ್ಲ . ಆದ್ದರಿಂದ ನಾವು ನೀರಿಗಾಗಿ ಕೆಲಸ ಮಾಡಬೇಕಾಗಿಲ್ಲ ! - ಎಂದು ನಾನು ಹೇಳಿದರೆ ‘ ನನಗೆ ಸದ್ಯಕ್ಕೆ ಹಸಿವಿಲ್ಲ , ಆದ್ದರಿಂದ ಇನ್ನು ನಾನು ಊಟಮಾಡಬೇಕಾಗಿಲ್ಲ ’ ಎಂದಂತೆ .  ಬೋರುವೆಲ್ ಪಕ್ಕ ಇಂಗುಗುಂಡಿ ನಮ್ಮದು ಕೃಷಿಮನೆ . ನನ್ನ ತಂದೆ ತಮ್ಮ ಕೈಯಲ್ಲಿ ಕಾಸಿಗೆ ತತ್ವಾರವಿದ್ದ ಕಾಲದಲ್ಲಿ ನೀರಿಗಾಗಿ ಸಾಕಷ್ಟು ಕಷ್ಟ ಪಟ್ಟಿದ್ದಾರೆ . ನಮ್ಮಲ್ಲಿ ನಾಲ್ಕು ಕೆರೆಗಳಿದ್ದವು ( ಈಗ ಮೂರಿವೆ ). ಬೇಸಿಗೆಯ ಕೊನೆಯ ತಿಂಗಳವರೆಗೆ ನೀರಿನ ಸಮಸ್ಯೆಯಿಲ್ಲ . ಆದರೆ ಕೆರೆಯಿಂದ ನೀರಾವರಿ ಮಾಡುವುದು ಕಷ್ಟ . ನೀರು ತೆಗೆದಷ್ಟೂ ಕೆರೆ ಬತ್ತುವುದು ಹೆಚ್ಚು . ವಿಲ್ಲಿಯರ್ಸ್ ಪಂಪನ್ನು ಒಂದು ಕೆರೆಯಿಂದ ಇನ್ನೊಂದು ಕೆರೆಗೆ ಹೊರುವುದು , ಹಾಳಾದಾಗ ನನ್ನ ಚಿಕ್ಕಜ್ಜ ರಾತ್ರಿಯಿಡೀ ಕೂತು ರಿಪೇರಿ ಮಾಡುವುದು ಎಂದೆಲ್ಲ ಪಡಿಪಾಟಲು ಪಡುತ್ತಿದ್ದ ದಿನಗಳಿದ್ದವು . ಮೂರು ಸ್ಲೋ ರಿಗ್ ಬೋರುವೆಲ್ಲುಗಳಲ್ಲಿ ನಿರಾಸೆಯ ಬರೆ ( ಶ್ರಮ ಮತ್ತು ದುಡ್ಡು ). ಇದೆಲ್ಲ ಕಳೆದು ಕಳೆದ ಸುಮಾರು ಇಪ್ಪತ್ತೈದು ವರ್ಷಗಳಿಂದ ನೀರಿನ ಕಷ್ಟವಿಲ್ಲ . ನನ್ನ ಬಾಲ್ಯದಿಂದ ಮೂರು ಬೋರು ಕೊರೆದಿದ್ದೇವೆ . ಮೂರೂ ಯಶಸ್ವಿ .  ಆದರೆ ಹಳೆಯ ನೆನಪು ಮಾಸಿಲ್ಲ . ನೀರೆಂಬುದು ನಿಂತ ನೀರಲ್ಲ . ಇಂದಿರುವ ಸಂಪತ