Posts

Showing posts from July, 2016

ಸಸ್ಯಾಧ್ಯಾಯಿ ಶ್ರೀ ಉದಯ ಕುಮಾರ್ ಶೆಟ್ಟಿ ಅವರ ಪರಿಚಯ - ನನಗೆ ತಿಳಿದಂತೆ

Image
ಸಸ್ಯಾಧ್ಯಾಯಿ ಶ್ರೀ ಉದಯ ಕುಮಾರ್ ಶೆಟ್ಟಿ ಅವರ ಪರಿಚಯ - ನನಗೆ ತಿಳಿದಂತೆ 
ಪಿಲಿಕುಳ ಔಷಧೀಯ ಉದ್ಯಾನದ ಸಸ್ಯ ವೈವಿಧ್ಯ ವೃದ್ಧಿ, ನಿರ್ವಹಣೆಯಲ್ಲಿ ಆರಂಭದಿಂದ ಇಲ್ಲಿಯವರೆಗೆ ಕೆಲಸ ಮಾಡುತ್ತಿರುವ ಶ್ರೀ ಉದಯ ಕುಮಾರ ಶೆಟ್ಟರಿಗೆ ತಾ| 27 ದಶಂಬರ್ 2015 ರಂದು 'ಕಜೆ ವೃಕ್ಷಾಲಯ'ದಲ್ಲಿ ನಡೆದ ಗೌರವ ಸಮರ್ಪಣೆಯಲ್ಲಿ ಅವರ ಬಗ್ಗೆ ಮಾಡಿದ ಪರಿಚಯ ಭಾಷಣ. 


ಸೊಪ್ಪಿನಗುಡ್ಡದಲ್ಲೊಂದುಸಭೆ, ತರಗೆಲೆಯೇನೆಲಹಾಸು, ತೋಟದಲ್ಲಿಊಟ, ದಿನವಿಡೀಕಾಡುಖಗಮೃಗಸಸ್ಯಗಳಗುಣಗಾನ. ಇಂತಹಸಭೆಯಲ್ಲೊಂದುಸನ್ಮಾನ!. ಇಂತಹ ಕುಚೇಲ ಪರಿಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ನಡೆಯುವ ಸನ್ಮಾನದ ಪರಿ ಏನು ಎಂಬ ಕುತೂಹಲ ನಿಮ್ಮಲ್ಲಿರುವುದು ಸಹಜ. ಹೌದು, ಇದು ಸರಳ, ಸಜ್ಜನ, ಪ್ರಾಮಾಣಿಕ, ಅರಣ್ಯ ಕಾರ್ಯಕರ್ತರೊಬ್ಬರಿಗೆ ನಡೆಯುತ್ತಿರುವ ಸರಳ ಸನ್ಮಾನ. 'ಆರಣ್ಯ' ಎನ್ನುವ ಶಬ್ದಕ್ಕೆ ಸಂಸ್ಕ್ರತದಲ್ಲಿ 'ಎಲ್ಲಿಂದ ನಾವಿರುವ ನೆಲೆಯ ಮೇಲ್ಛಾವಣಿಯನ್ನು ನೋಡಲಾಗುವುದಿಲ್ಲವೋ ಅಲ್ಲಿಂದ' ಎನ್ನುವ ಅರ್ಥವಿದೆ. ಅಂದರೆ ಕಾಡು ಎಂದರ್ಥ. ತಲೆಯೆತ್ತಿ ನೋಡಿದಾಗ ವಿಶಾಲಾಗಸ, ಪಾದದಡಿ ಸುಡುವ ಮುರಕಲ್ಲು ಇದ್ದ ಪಿಲಿಕುಳದ ಏಳೆಕರೆ ಗುಡ್ಡದಲ್ಲಿ ಅರಣ್ಯವನ್ನು ಸೃಷ್ಟಿಸಿದ ಉದಯಕುಮಾರ ಶೆಟ್ಟರನ್ನು ಈ ಅರಣ್ಯ ನಿರ್ಮಿತ ಸಹಜ ನೆರಳಿನಲ್ಲಿ ಸತ್ಕರಿಸಲು ನಮಗೆ ಸಂತೋಷವೆನಿಸುತ್ತದೆ. * * * ಶ್ರೀ ಉದಯಕುಮಾರ ಶೆಟ್ಟರು ದೇವಸ್ಯ ಕುಡೆತ್ತೂರು ಶಾಂತಲಾ ಶೆಟ್ಟಿ ಮತ್ತು ಕೊಳ್ನಾಡು ಪಡ್ಡೆ…

Growing Paddy Part 2 - The science and art of chapeneji (ಚಾಪೆನೇಜಿ)

Image
The biggest of the trees start their life with minute seeds. Grasses and hence rice, can’t be an exception.