ವೃತ್ತಿ ಜೀವನದ ಸರಿತಪ್ಪುಗಳು

ವೃತ್ತಿ ಜೀವನದ ಸರಿತಪ್ಪುಗಳು

ದಿ ಹಿಂದೂ ಪತ್ರಿಕೆಯಲ್ಲಿ ಫೆಬ್ರವರಿ 15, 2005ರಲ್ಲಿ ಪ್ರಕಟವಾದ ಪ್ರಯಾಗ್ ಜೋಷಿ ಎಂಬವರ ಲೇಖನದ ಯಥಾವತ್ ಅನುವಾದ.

ಮೂಲಲೇಖನ - http://www.thehindu.com/op/2005/02/15/stories/2005021500171500.htm

ನನಗೆ ಮೂವತ್ತು ತುಂಬಿದ ಮೇಲೆ, ಜೀವನದ ದಾರಿಯಲ್ಲಿ ಬಹಳಷ್ಟು ನಡೆದ ಮೇಲೆ, ತಡವಾಗಿ, ನನ್ನ ಕೆಲಸ ಕಾರ್ಯಗಳ, ವೃತ್ತಿಜೀವನದ ನೈತಿಕತೆಯನ್ನು ಪ್ರಶ್ನಿಸಲು ಶುರುಮಾಡಿದೆ. ಹತ್ತು ಹಲವು ಪ್ರಶ್ನೆಗಳ ಮಧ್ಯೆ, ನಾನು ಜೀವನೋಪಾಯಕ್ಕಾಗಿ ದುಡ್ಡು ಸಂಪಾದಿಸುವ ದಾರಿ ಸರಿಯಿದೆಯೇ ಎಂಬುದು ನನಗೊಂದು ಮುಖ್ಯ ಪ್ರಶ್ನೆಯಾಯಿತು. ದರೋಡೆ ಮಾಡಿ ಜೀವನ ಮಾಡುವುದು ತಪ್ಪೆಂದು ನನಗೆ ಗೊತ್ತಿತ್ತು, ಆದರೆ ಅದಕ್ಕಿಂತ ಹೆಚ್ಚು ವಿವರವಾಗಿ ನಾನು ಚಿಂತಿಸಿರಲಿಲ್ಲ.

ಆಮೇಲೆ ತಡಮಾಡದೆ ನನ್ನ ಕನ್ಸಲ್ಟಿಂಗ್ ಉದ್ಯೋಗವನ್ನು ಬಿಟ್ಟೇ ಬಿಟ್ಟೆ; ಏಕೆಂದರೆ ಅದರ ನೈತಿಕ ತಪ್ಪುಗಳು ನನಗೆ ಸುಸ್ಪಷ್ಟವಾದವು. ನಾನು ವಿದೇಶಿ ವ್ಯಾಪಾರಿಗಳ ಪರವಾಗಿ ಸರಕಾರದ ಬಳಿ ವಶೀಲಿಬಾಜಿ ಮಾಡುತ್ತಿದ್ದೆ, ಆಮೂಲಕ ನಿಯಮಗಳನ್ನು ಸಡಿಲಿಸಿ ಅವರು ನಮ್ಮಲ್ಲಿ ನೆಲೆನಿಲ್ಲುವಂತೆ ಮಾಡುತ್ತಿದ್ದೆ. ರೀತಿ ಮಾಡುವುದರಿಂದ, ನನಗೆ ಆತ್ಮೀಯನಾಗಿದ್ದ ನೆರೆಯ ಕಿರಾಣಿ ಅಂಗಡಿ ಅಂಗಡಿಯವನನ್ನು ಒಕ್ಕಲೆಬ್ಬಿಸುವಲ್ಲಿ ನಾನು ಒಂದುರೀತಿಯಲ್ಲಿ ಪಾತ್ರವಹಿಸುತ್ತಿದ್ದೆ. ಧಾರಾಳ ದುಡ್ಡು ಮತ್ತು ಆಕರ್ಷಕ ಕನ್ಸಲ್ಟಿಂಗ್ ಕೆಲಸ ನಮಗೆ ಕೊಟ್ಟುದಕ್ಕೆ ಬದಲಾಗಿ ನಾವು ಕಂಪನಿಗಳಿಗೆ ಎಲ್ಲವೂ ಸರಿಯಿಲ್ಲಎಂದು ತಿಳಿದಿದ್ದರೂ ನಾವು ಕ್ಲೀನ್ ಚಿಟ್ಕೊಡುತ್ತಿದ್ದೆವು. ಕೆಲವೊಮ್ಮೆ ಬೇರೆ ಕನ್ಸಲ್ಟೆಂಟ್ ಗಳಿಗೆ ಅವರನ್ನು ಕಳಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದೆವು ಆದರೆ ನಾವೆಂದೂ ಸರಿದಾರಿಯಲ್ಲಿ ನಡೆಯಲು ಕಂಪನಿಗಳನ್ನು ಬಗ್ಗಿಸುತ್ತಿರಲಿಲ್ಲ.

ನನ್ನ ಬಾಲಿಶ ನಡೆ

ಇದು ತಪ್ಪೆಂದು ತಿಳಿದಮೇಲೆ ನಾನು ಕೆಲಸ ಬಿಟ್ಟು ಪ್ರಕೃತಿಯ ರಕ್ಷಣೆಗೆ ವಶೀಲಿ ಮಾಡುವ ಒಂದು ದೊಡ್ಡ ಅಂತರರಾಷ್ಟ್ರೀಯ NGOಕ್ಕೆ ಸೇರಿ ನನ್ನ ನೈತಿಕತೆಯನ್ನು ಸರಿಪಡಿಸಲು ಪ್ರಯತ್ನಮಾಡಿದೆ. ಕೆಲವೇ ಸಮಯದಲ್ಲಿ ವಿಮಾನದಲ್ಲಿ ಹಾರುವುದು, ಬೋರ್ಡ್ ರೂಮ್ ಗಳಲ್ಲಿ ಕುಳಿತು ಕೋಕ್ ಕುಡಿಯುತ್ತ ಟಿಶ್ಯು ಪೇಪರ್ ನಲ್ಲಿ ಎಂಜಲು ಕೈಯನ್ನು ಒರೆಸಿಕೊಳ್ಳುವುದು, ಸಂಸ್ಥೆಯು ಮಾಡಿದ ಕಾನೂನಿನ ತಪ್ಪುಗಳನ್ನು ಮುಚ್ಚಿಹಾಕುವುದು, ಜನಸಾಮಾನ್ಯರು ಸದುದ್ದೇಶದಿಂದ ಕೊಟ್ಟ ದೇಣಿಗೆಯಿಂದ ಕೆಲಸಕ್ಕೆ ದೊಡ್ಡ ಸಂಬಳ ಪಡೆಯುವುದು - ಇದನ್ನೇ ಮಾಡತೊಡಗಿದೆ. ಕೆಲವು ತಿಂಗಳಲ್ಲಿ ಕೆಲಸವನ್ನೂ ಬಿಟ್ಟೆ!
ಇತ್ತೀಚೆಗೆ ನನ್ನ ಮಗಳ ಶಾಲೆಯ ಪೋಷಕರ ದಿನದಂದು ಅಲ್ಲಿಗೆ ಬಂದಿದ್ದ ಆಪ್ತಸಮಾಲೋಚಕ (ಕೌನ್ಸೆಲರ್), ಗಳಲ್ಲಿ ಕೆಲಸ ಮಾಡುವುದು ಆಕರ್ಷಕ ಉದ್ಯೋಗವೆಂದೂ, ಒಳ್ಳೆಯ ಸಂಬಳವಿದೆಯೆಂದೂ ಹೇಳುತ್ತಿದ್ದ. ನನಗವನ ಉಪದೇಶ ಪ್ರಶ್ನಾರ್ಹವಾಗಿ ಕಂಡಿತು.

ಅಹಿಂಸೆಯಲ್ಲಿ ನಂಬಿಕೆಯಿಡುವವನೊಬ್ಬ ಮಿಲಿಟರಿ ಸಂಶೋಧನೆಯ ಕೆಲಸಮಾಡುವ ಕಂಪನಿಯಲ್ಲಿ ಸರಿಯೇ? ತಪ್ಪೇ? ಎನ್ನುವ ಬಗ್ಗೆ ಸದ್ಯಕ್ಕೆ ನಾನು ನನ್ನ ಭಾವನೊಂದಿಗೆ ಒಂದು ಚರ್ಚೆಯನ್ನು ನಡೆಸುತ್ತಿದ್ದೇನೆ. ಇದರಲ್ಲಿ ಚರ್ಚಿಸುವಂತ ನೈತಿಕ ವಿಷಯವೊಂದು ಇದೆಯೆಂದು ಅವನಿಗೆ ಅಂದಾಜಾಗುತ್ತಿಲ್ಲನಾನು ಲೇಖನವನ್ನು ಬರೆಯಲು ಹೊರಟಿದ್ದೇಕೆಂದರೆ - ನನ್ನೊಳಗೆ ಮತ್ತು ಇತರರಲ್ಲಿ ನಮ್ಮ ಕ್ರಿಯೆಗಳ ನೈತಿಕತೆಯನ್ನು ಪ್ರಶ್ನಿಸುವಲ್ಲಿ ಭಾರೀ ಹಿಂಜರಿಕೆ ಇದೆಯೆನ್ನುವುದನ್ನು ಗುರುತಿಸುವಾಗ ಇದೇಕೆ ಹೀಗೆಂದು ನನಗೆ ತುಂಬ ಚಡಪಡಿಕೆಯಾಗುತ್ತಿದೆ. ಮುಖ್ಯವಾಗಿ ಅದು ನಮ್ಮ ಉದ್ಯೋಗಕ್ಕೆ ಸಂಬಂಧಪಟ್ಟುದಾದರೆ - ಉಹುಂ ಇಲ್ಲವೇ ಇಲ್ಲ.

ನನ್ನ ಪ್ರಕಾರ ನಮ್ಮ ಕೆಲಸಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಸಣ್ಣ ಹಲ್ಲಿನನೈತಿಕ ಬಾಚಣಿಗೆಯಿಂದಬಾಚಿ ಜರಡಿ ಹಿಡಿಯುವುದು ಬಹುಮುಖ್ಯ. ಏಕೆಂದರೆ ನಮ್ಮ ಎಚ್ಚರವಿರುವ ಸಮಯದಲ್ಲಿ ಅರ್ಧಭಾಗವನ್ನು ನಾವು ನಮ್ಮ ಉದ್ಯೋಗದಲ್ಲಿ ಕಳೆಯುತ್ತೇವೆ. ನಮ್ಮ ಉದ್ಯೋಗವೇ ನಮ್ಮ ಜೀವನಪದ್ಧತಿಯಾಗಿ ಬಿಡುತ್ತದೆ. ಆದ್ದರಿಂದ ನಾವು ಸರಿಯಾದುದನ್ನುಮಾಡಬೇಕಾದುದು ಅತೀ ಅಗತ್ಯ.

ನಾವು ಹೆಚ್ಚಾಗಿ ಮಕ್ಕಳಿಗೆ ಉಪದೇಶ ಮಾಡುವಾಗ ನಿಮ್ಮ ಹೃದಯ ಹೇಳಿದಂತೆ ಮಾಡಿಎಂದು ಹೇಳುವುದಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಅವಕಾಶಗಳಿವೆ ಎಂದು ಹೇಳುವುದುಂಟು. ಆದರೆ ನಾವು ಅವರಿಗೆ ಅವರ ಹೃದಯದ ಕರೆಯು ಸಮಾಜಕ್ಕೆ ಒಳಿತನ್ನು ಉಂಟುಮಾಡಬೇಕು ಎಂದೂ ಹೇಳುತ್ತೇವೆಯೆ?

ಎಷ್ಟು ವಿಶ್ಲೇಷಣೆ ಮಾಡಬೇಕು?

ನಾವು ನಮ್ಮ ಇಷ್ಟವೃತ್ತಿಗಳ ಸರಿತಪ್ಪುಗಳನ್ನು ತೂಗುವಾಗ ಎಷ್ಟು ಸೂಕ್ಷ್ಮವಾಗಿ ತೂಗಬೇಕು? ನಮ್ಮ ಕೆಲಸವನ್ನು ಮಾತ್ರ ನೋಡಿದರೆ ಸಾಕೆ? ಅಥವಾ ನಮ್ಮ ಸಂಸ್ಥೆಯ ಧ್ಯೇಯೋದ್ದೇಶಗಳ ಸರಿತಪ್ಪುಗಳನ್ನು ನೋಡಬೇಕೆ? ಇನ್ನಷ್ಟು ಮುಂದೆ ಹೋಗಿ ನಮ್ಮ ಸಂಸ್ಥೆಯ ಗ್ರಾಹಕರ ಸರಿ ತಪ್ಪುಗಳನ್ನು ಸೇರಿಸಬೇಕೆ? ಅಥವಾ ಇನ್ನೂ ಮುಂದೆ?

ಉದಾಹರಣೆಗೆ ತರಕಾರಿ ಕತ್ತರಿಸುವ ಚೂರಿ ತಯಾರಕನೊಬ್ಬ ತನ್ನ ಚೂರಿಯನ್ನು ಕೆಲವು ಮನೆಗಳಲ್ಲಿ ಹಿಂಸೆಗೆ ಉಪಯೋಗಿಸುತ್ತಾರೆ ಎಂಬ ಕಾರಣಕ್ಕೆ ಕಾರ್ಖಾನೆಯನ್ನು ಮುಚ್ಚಿಬಿಡಬೇಕೆ? ಅಟೊಮೊಬೈಲ್ ಕಂಪನಿಯ ಶೇರುಗಳನ್ನು ಪ್ರಕೃತಿಪ್ರೇಮಿಯೊಬ್ಬ ಕೊಳ್ಳುವುದು ಸರಿಯೆ? ವಾದಗಳು ಅತಿಯಾದವೆ?

ನಮ್ಮ ಜೀವನದ ಯಾವ ಹಂತದಲ್ಲಿ ಇದನ್ನೆಲ್ಲ ಯೋಚಿಸಬೇಕು? ವೃತ್ತಿಜೀವನದ ಆರಂಭದಲ್ಲಿ? ಮಧ್ಯದಲ್ಲಿ? ಅಥವಾ ಬೇಕಾದಷ್ಟು ದುಡ್ಡು ಸಂಪಾದಿಸಿದ ಬಳಿಕ? ಒಂದೊಳ್ಳೆಯ ವ್ಯವಹಾರವನ್ನು ಅದರ ನೈತಿಕ ತಪ್ಪಿಗಾಗಿ ನಿಲ್ಲಿಸಿದರೆ ಅದರ ಮೇಲೆ ಅವಲಂಬಿಸಿರುವ ಇತರೆ ಉದ್ಯೋಗಿಗಳು ಮತ್ತು ನಮ್ಮ ಸಂಸಾರದ ಗತಿಯೇನು? ಅವರನ್ನು ಕಡೆಗಣಿಸುವುದು ಸರಿಯೆ? ಯಾವುದು ಹೆಚ್ಚು ಮುಖ್ಯ - ವೃತ್ತಿ ಜೀವನದ ನೈತಿಕತೆಯೇ ಅಥವಾ ಸಂಸಾರದೆಡೆಗಿನ ಬದ್ಧತೆಯೆ?

ನನ್ನನ್ನು ಕೇಳಿದರೆ ವೃತ್ತಿ ಜೀವನದ ನೈತಿಕತೆ ನಮ್ಮ ಹೃದಯದ ಕರೆಅಥವಾ ಜವಾಬ್ದಾರಿಗಳಿಗಿಂತ ಮುಖ್ಯವೆಂದು ಹೇಳಬಯಸುತ್ತೇನೆ. ನಮ್ಮ ಮೇಜಿಗಿಂತ ಸಾಧ್ಯವಾದಷ್ಟು ದೂರಕ್ಕೆ ನೋಡಿ ನಮ್ಮ ಕೆಲಸದ ಸಾಮಾಜಿಕ ಮತ್ತು ಪಾರಿಸರಿಕ ಪರಿಣಾಮಗಳನ್ನು ತೂಗಿ ನಿರ್ಧರಿಸಬೇಕೆನ್ನುತ್ತೇನೆ - ಅದು ನಮ್ಮಿಷ್ಟಕ್ಕೆ ಅಥವಾ ನಮ್ಮ ಆರ್ಥಿಕ ಸ್ಥಿರತೆಗೆ ಪೆಟ್ಟುಮಾಡಿದರೂ ಸರಿಯೇ. ಇಷ್ಟಲ್ಲದೆ ನಮ್ಮ ಕೆಲಸಕಾರ್ಯಗಳನ್ನು ಮತ್ತೆ ಮತ್ತೆ ಪರೀಕ್ಷೆಗೆ ಒಡ್ಡಿಕೊಳ್ಳಬೇಕು - ನಮ್ಮ ಅಂತಿಮ ಗುರಿ ಎಷ್ಟೇ ಉದಾತ್ತವಾಗಿದ್ದರೂ ಸರಿ. ಗಾಂಧೀಜಿ ಹೇಳಿದಂತೆ ಗುರಿಯಷ್ಟೇ ಮಾರ್ಗವೂ ಮುಖ್ಯವೇ. ನಾನು ನನಗೆ ಬೇಕಾದಷ್ಟು ದುಡ್ಡು ಮಾಡಿದ ಮೇಲೆ ಪ್ರಶ್ನೆಯನ್ನು ಕೇಳಿಕೊಂಡೆ ಎಂಬ ಪಾಪಪ್ರಜ್ಞೆ ನನಗಿದೆ. ಆದರೆ ಇನ್ನಷ್ಟು ಮುಂದುವರೆಯುವ ದಾರಿಯಂತೂ ಇದಲ್ಲ ಎನ್ನುವುದು ನನಗೆ ಸ್ಪಷ್ಟ.

[ಪ್ರಯಾಗ್ ಜೋಶಿ ಈಗ ತಮ್ಮ ಚಾರ್ಟರ್ಡ್ ಅಕೌಂಟೆನ್ಸಿಯನ್ನು ಬಿಟ್ಟು 'ಇಮ್ಲೀ ಮಹುವ ಸ್ಕೂಲ್' ಎಂಬ ಶಾಲೆಯನ್ನು ನಡೆಸುತ್ತಿದ್ದಾರೆ.]

-      ಪ್ರಯಾಗ್ ಜೋಷಿ

Comments

  1. ನಮ್ಮ ಜೀವನದ ಯಾವ ಹಂತದಲ್ಲಿ ಇದನ್ನೆಲ್ಲ ಯೋಚಿಸಬೇಕು? ಪ್ರತೀ ಹಂತದಲ್ಲಿ. ಆತ್ಮವಿಕಾಸದ ಹಾದಿಯೇ ಹಾಗೆ

    ReplyDelete

Post a Comment

Popular posts from this blog

ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’

ಜೀವನ ದ್ರಷ್ಟಾರ ಕೆ.ಯನ್.ಶಂಕರ ಭಟ್ಟರು

Seeds as gifts and souvenirs!