ಫಲಪುಷ್ಫಸಸ್ಯ ವಿಶೇಷ - ಮುಚ್ಚೀರು ಮತ್ತು ಚಾಲ್ತ
ಗಣನೆಗೆ ಬಾರದ ಮತ್ತು ನಶಿಸುತ್ತಿರುವ
ಕಾಡುಹಣ್ಣುಗಳ ಪಟ್ಟಿಗೆ ಮುಚ್ಚೀರು(ಕಾಡು
ಕಣಗಿಲು/ಕಲ್ತೇಗ) ಮತ್ತು ಚಾಲ್ತ
(elephant apple) ಸೇರುತ್ತವೆ.
ಮುಚ್ಚೀರು (ಅಥವಾ ಮುಚ್ಚಿರೆ) ಪಶ್ಚಿಮಘಟ್ಟದ
ಮಟ್ಟಿಗೆ ಸಾಮಾನ್ಯ. ನನ್ನ ಪ್ರಕಾರ
ಚಾಲ್ತದ ಗಿಡಗಳು ಕರ್ಣಾಟಕದಲ್ಲಿ ತುಂಬಾ
ಕಡಿಮೆ. ನನಗೆ ತಿಳಿದಂತೆ ಮೈಸೂರು
ರಾಮಕೃಷ್ಣಾಶ್ರಮ, ಬೆಂಗಳೂರಿನ ಲಾಲ್ ಭಾಗ್,
ಧರ್ಮಸ್ಥಳದ ವೃಕ್ಷಾಲಯಗಳಲ್ಲಿ ಚಾಲ್ತದ ಮರಗಳು ಇವೆ.
ಇವೆರಡೂ ಡಿಲ್ಲೇನಿಯೇಸಿಯೇ ಕುಟುಂಬದಲ್ಲಿ ಸೋದರ ಸಂಬಂಧಿಗಳು. ಈ
ಕುಟುಂಬದ ಒಂದು ಲಕ್ಷಣವೆಂದರೆ, ಹೂವು
ಫಲಿತು ಕಾಯಿಯಾಗುತ್ತಿದ್ದಂತೆ ಹೂವಿನ ಪುಷ್ಪಪಾತ್ರೆ(calyx) ಉದುರಿಹೋಗದೆ,
ಇನ್ನಷ್ಟು ಮಾಂಸಲವಾಗಿ ಕಾಯಿಗೆ ಸಿಪ್ಪೆಯಂತೆ
ಆವರಿಸಿಕೊಳ್ಳುತ್ತವೆ.
ಈಕಾರಣದಿಂದ ಚಾಲ್ತದ ಬಗ್ಗೆ ಒಂದು ಆಸಕ್ತಿಕರ ಕಥೆ ಇದೆ. ಬ್ರೆಜಿಲ್ ನ ರಾಜ, ಪೋರ್ಚಿಗೀಸ್ ರಾಜನೊಬ್ಬನಿಗೆ ಚಾಲ್ತದ ಹಣ್ಣುಗಳನ್ನು ಕಳಿಸಿಕೊಟ್ಟನಂತೆ. ಒಡೆದು ನೋಡಿದರೆ ಪೋರ್ಚಿಗೀಸರಿಗೆ ಆಶ್ಚರ್ಯ – ಪ್ರತಿಯೊಂದು ಹಣ್ಣಿನೊಳಗೆ ಒಂದೊಂದು ನಾಣ್ಯ!. ಬ್ರೆಜಿಲ್ ನ ರಾಜ ಜಾಣ್ಮೆಯಿಂದ ಹೂವು ಅರಳಿದಾಗಲೇ ಇರಿಸಿದ್ದ ನಾಣ್ಯಗಳು ಹಣ್ಣಾಗುವಾಗ ಪಕಳೆಗಳಿಂದ ಸುತ್ತುವರೆದು ಹಣ್ಣಿನೊಳಗೆ ಸೇರಿಹೋಗಿದ್ದವು. ಇದು ನಿಜವೋ ಸುಳ್ಳೊ, ಎನ್ನುವುದು ಪಕ್ಕಕ್ಕಿರಲಿ; ಹಣ್ಣಿನ ರಚನಾ ವಿಶೇಷವನ್ನು ತಿಳಿಸಿಹೇಳುವುದಂತೂ ದಿಟ.
ನಾವುಗಳು ಮುಚ್ಚೀರು ಹಣ್ಣನ್ನು ಅಷ್ಟಾಗಿ ಖಾದ್ಯವಸ್ತುವೆಂದು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಮಂಗಗಳು ಧಾರಾಳವಾಗಿ ತಿನ್ನುತ್ತವೆ. ಆದರೆ ನಾವು ರುಚಿನೋಡಿದರೆ ಆಮೇಲೆ ಮಂಗಗಳಿಗೆ ಸಿಗವುದು ಕಷ್ಟ. ಸಣ್ಣ ದ್ರಾಕ್ಷಿಯ ಗಾತ್ರದ ಹಣ್ಣು, ಹಳದಿ ಬಣ್ಣ. ಶುದ್ಧ ಸಿಹಿ. ಸಿಪ್ಪೆ ಸಮೇತ ತಿಂದು ಬೀಜ ಉಗುಳಬಹುದು.
ಒಂದು ಹಣ್ಣಿಗೆ ನಾಲ್ಕೈದು ಬೀಜಗಳು.
ಸುಲಭವಾಗಿ ಹುಟ್ಟುವುದಿಲ್ಲ. ಏಲಕ್ಕಿಯ ಒಂದು ಕಾಳಿನಷ್ಟಿರುವ
ಬೀಜದಿಂದ ಹುಟ್ಟಿದ ಮುಚ್ಚೀರಿನ ಗಿಡಗಳು
ಬೆಳೆಯುತ್ತಾ ದಷ್ಟಪುಷ್ಟ. ನೋಡಿದರೆ ಮೋಡಿಗೊಳಿಸುವ ಗಾತ್ರ.
ಎಲೆಗಳು ಬಾಳೆ ಎಲೆಯಂತೆ ಸಾಕಷ್ಟು
ದೊಡ್ಡವು. ಅಂಚಿನ ಮೇಲೆ ಸಣ್ಣ
ಹಲ್ಲುಗಳಿವೆ (ಚಿತ್ರ ಗಮನಿಸಿ). ಎಲೆಗಳು
ಒಂಟೊಂಟಿಯಾಗಿದ್ದು, ಕಾಂಡದ ಸುತ್ತ ಸುರುಳಿ
ಜೋಡಣೆ (spiral). ಒಂದೆರಡು ಮೂರು ವರ್ಷ
ಬೆಳೆದ ಗಿಡಗಳು ಕಂಬದಂತೆ ನೇರವಾಗಿ
ನಿಂತು ಅಗಲವಾಗಿ ಎಲೆಯನ್ನು ಚಾಚುತ್ತವೆ.
ಉರುಟಾಗಿ ಬೆಳೆಯುವ ಸುಪುಷ್ಟ ಕಾಂಡ.
ಮಲೆನಾಡಿನಲ್ಲಿ ವೇಗವಾಗಿ ಬೆಳೆಯುತ್ತವೆ. ವರುಷಕ್ಕೊಮ್ಮೆ
ಎಲೆಯುದುರಿಸುತ್ತದೆ. ಪ್ರತಿಯೊಂದು ಎಲೆ ಉದುರಿದ ಗಾಯದಲ್ಲಿ(leaf
scar) ಒಂದೊಂದು ಪುಟ್ಟ ಹೂವು. ಫಲಿತ
ಮೇಲೆ ಮರದ ತುಂಬೆಲ್ಲ ಪುಟ್ಟ
ಪುಟ್ಟ ಹಣ್ಣುಗಳು! ತಿನ್ನಬೇಕೆಂದರೆ ಹಣ್ಣುಗಳ
ಕೊಯ್ಲು ಮಾಡಬೇಕೆಂದಿಲ್ಲ. ಸಹಜವಾಗಿ ನೆಲೆಕ್ಕುದುರುವ ಹಣ್ಣುಗಳನ್ನು
ಹೆಕ್ಕಿ ತಿನ್ನಬಹುದು. ಮರಕ್ಕೆ ಅಲಂಕಾರಿಕ ಮಹತ್ವ
ಬಹಳ ಇದೆ. ಮುಚ್ಚೀರಿನ
ಎಲೆಗಳು ಆಕಳುಗಳಿಗೆ ಪೌಷ್ಟಿಕ ಗಂಜಿ
(ಮಡ್ಡಿ) ಇಡಲು ಉಪಯುಕ್ತ. ಮರಕ್ಕೆ
ಆಯುರ್ವೇದೀಯ ಮಹತ್ವ ಇದೆ.
ಫಕ್ಕನೆ ನೋಡಿದರೆ ಚಾಲ್ತ ಮತ್ತು ಮುಚ್ಚೀರಿಗೆ ಬಹಳ ಸಾಮ್ಯತೆ ಇದೆ. ಎಲೆಗಳ ಆಕಾರ ಒಂದೇ, ಆದರೆ ಚಾಲ್ತದವು ಸ್ವಲ್ಪ ಸಣ್ಣವು (ಚಿತ್ರ ಗಮನಿಸಿ). ಚಾಲ್ತದ ಸಣ್ಣ ಗಿಡಗಳು ಮುಚ್ಚೀರಿನಷ್ಟು ನೇರ,ಸುಂದರವಾಗಿ ಅಬ್ಬಾ! ಎನ್ನುವಂತೆ ಬೆಳೆಯುವುದಿಲ್ಲ. ಆದರೆ ಬೆಳೆದಂತೆ ಬೃಹತ್ ಮರ. ಚಾಲ್ತದ ಬಿಳಿಯಾದ ಹೂವು ಸಾಕಷ್ಟು ದೊಡ್ಡದು, ಅತಿ ಸುಂದರ. ಒಳಗೆ ನೂರಾರು ಹಳದಿ ಕೇಸರಗಳು. ಮಧ್ಯೆ ಚಕ್ರದಂತೆ ಅರಳಿ ನಿಂತ ಶಲಾಕಾಗ್ರ. ಚಾಲ್ತದ ಹಣ್ಣಿಗಂತೂ ದೊಡ್ಡ ಕ್ರಿಕೆಟ್ ಬಾಲಿನ ಗಾತ್ರ- ಆನೆ ಸೇಬು ಎನ್ನುವ ಹೆಸರು ಸಾರ್ಥಕ. ಹುಳಿಸಿಹಿ ರುಚಿಯಂತೆ. ಉತ್ತರಭಾರತದಲ್ಲಿ ಅಡಿಗೆ, ಉಪ್ಪಿನಕಾಯಿಗೆ ವ್ಯಾಪಕ ಬಳಕೆಯಿದೆ.
ಟಿಂಬರ್ ಮೌಲ್ಯವಿಲ್ಲದ, ಮಾರಾಟದ ಹಣ್ಣಾಗಿ ಪ್ರಸಿದ್ಧಿ
ಇರದ ಮುಚ್ಚೀರಿನಂಥ ಮರವನ್ನು
ನಾಗರೀಕ ಜಗತ್ತು ಒಂದು ಸಂಪತ್ತೆಂದು
ಗಣಿಸುವುದಿಲ್ಲ. ಪ್ರಾಕೃತಿಕ ಸ್ಥಿರತೆಯಲ್ಲಿ ಅನನ್ಯ
ಪಾತ್ರವಹಿಸುವ, ಆದರೆ ದೇಶದ ಜಿಡಿಪಿಯೆಂಬ
ಮೂರ್ಖ ಸೂಚ್ಯಂಕಕ್ಕೆ ಯಾವುದೇ ಕೊಡುಗೆ ನೀಡದ
ಗಿಡ, ಮರ, ಬಳ್ಳಿ, ಪ್ರಾಣಿಗಳೆಲ್ಲ
ನಮಗಿಂದು ಬೇಡವಾಗಿದೆ. ಸುಂದರವಾದ ಚಿಟ್ಟೆಗಳನ್ನು ಇಷ್ಟ
ಪಡುವ ನಾವು, ಅದಕ್ಕೆ ಕಾರಣವಾಗುವ
ಕಂಬಳಿಹುಳುಗಳನ್ನು ವಿಷಹಾಕಿ ಕೊಲ್ಲುತ್ತೇವೆ. ಅದೇರೀತಿ
ಶುದ್ಧವಾದ ಗಾಳಿ ನೀರು ಆಹಾರಗಳನ್ನು
ದುಡ್ಡುಕೊಟ್ಟಾದರೂ ಕೊಂಡುಕೊಳ್ಳುವ ನಾವುಗಳು, ಅದಕ್ಕೆ ಕಾರಣವಾಗುವ
ಸಾವಿರಾರು ಜೀವಿಗಳ ಅನೂಹ್ಯ ಜೋಡಣೆಯ
ಬಲೆಯನ್ನು ಯದ್ವಾತದ್ವಾ ತುಂಡರಿಸುತ್ತಿದ್ದೇವೆ. ಆದಷ್ಟು ಬೇಗ ನಾವುಗಳು
ಕಣ್ತೆರೆದು, ಮುಚ್ಚೀರು, ಚಾಲ್ತಗಳಲ್ಲದೆ ಇತರೆಲ್ಲ
ಜೀವ ಸಂಪತ್ತನ್ನು ನಮ್ಮ
ಮುಂದಿನ ಪೀಳಿಗೆಗಾಗಿ ಉಳಿಸಬೇಕಾಗಿದೆ.
[ಮುಚ್ಚೀರಿನ ಗಿಡ ನನಗೆ ಚಾರ್ಮಾಡಿ ದಾರಿಯ ಬದಿಯಲ್ಲಿ ದೊರೆಯಿತು. ಚಾಲ್ತ ಸಿಗುವುದು ಕಡುಕಷ್ಟ. ಅದೃಷ್ಟವಶಾತ್ ನನಗೆ Infosys ಸಂಸ್ಥೆಯವರು ಒಂದು ಗಿಡವನ್ನು ಕೊಡುಗೆಯಾಗಿ ಕೊಟ್ಟರು. ಅವರಿಗೆ ನನ್ನ ವಂದನೆಗಳು. ಮುಚ್ಚೀರಿನ ಗಿಡ ತುಂಬ ಆತ್ಮವಿಶ್ವಾಸದಿಂದ 'ಸೊಕ್ಕಿ' ಬೆಳೆಯುತ್ತಿದೆ. ಚಾಲ್ತದ ವೇಗ ಸದ್ಯಕ್ಕೆ ಕಡಿಮೆ.]
![]() |
ಮುಚ್ಚೀರಿನ ಎಳೆಗಿಡ - ಎಲೆಗಳು ಮರದಲ್ಲಿದ್ದುದಕ್ಕಿಂತ ದೊಡ್ಡವು |
ಈಕಾರಣದಿಂದ ಚಾಲ್ತದ ಬಗ್ಗೆ ಒಂದು ಆಸಕ್ತಿಕರ ಕಥೆ ಇದೆ. ಬ್ರೆಜಿಲ್ ನ ರಾಜ, ಪೋರ್ಚಿಗೀಸ್ ರಾಜನೊಬ್ಬನಿಗೆ ಚಾಲ್ತದ ಹಣ್ಣುಗಳನ್ನು ಕಳಿಸಿಕೊಟ್ಟನಂತೆ. ಒಡೆದು ನೋಡಿದರೆ ಪೋರ್ಚಿಗೀಸರಿಗೆ ಆಶ್ಚರ್ಯ – ಪ್ರತಿಯೊಂದು ಹಣ್ಣಿನೊಳಗೆ ಒಂದೊಂದು ನಾಣ್ಯ!. ಬ್ರೆಜಿಲ್ ನ ರಾಜ ಜಾಣ್ಮೆಯಿಂದ ಹೂವು ಅರಳಿದಾಗಲೇ ಇರಿಸಿದ್ದ ನಾಣ್ಯಗಳು ಹಣ್ಣಾಗುವಾಗ ಪಕಳೆಗಳಿಂದ ಸುತ್ತುವರೆದು ಹಣ್ಣಿನೊಳಗೆ ಸೇರಿಹೋಗಿದ್ದವು. ಇದು ನಿಜವೋ ಸುಳ್ಳೊ, ಎನ್ನುವುದು ಪಕ್ಕಕ್ಕಿರಲಿ; ಹಣ್ಣಿನ ರಚನಾ ವಿಶೇಷವನ್ನು ತಿಳಿಸಿಹೇಳುವುದಂತೂ ದಿಟ.
![]() |
ಚಾಲ್ತದ ಹಣ್ಣು. ಹೊರಗಿನ ಸಿಪ್ಪೆ ಮಾಂಸಲ ಪುಷ್ಪಪಾತ್ರೆ |
ನಾವುಗಳು ಮುಚ್ಚೀರು ಹಣ್ಣನ್ನು ಅಷ್ಟಾಗಿ ಖಾದ್ಯವಸ್ತುವೆಂದು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಮಂಗಗಳು ಧಾರಾಳವಾಗಿ ತಿನ್ನುತ್ತವೆ. ಆದರೆ ನಾವು ರುಚಿನೋಡಿದರೆ ಆಮೇಲೆ ಮಂಗಗಳಿಗೆ ಸಿಗವುದು ಕಷ್ಟ. ಸಣ್ಣ ದ್ರಾಕ್ಷಿಯ ಗಾತ್ರದ ಹಣ್ಣು, ಹಳದಿ ಬಣ್ಣ. ಶುದ್ಧ ಸಿಹಿ. ಸಿಪ್ಪೆ ಸಮೇತ ತಿಂದು ಬೀಜ ಉಗುಳಬಹುದು.
![]() |
ಮುಚ್ಚಿರು ಹಣ್ಣು |
ಫಕ್ಕನೆ ನೋಡಿದರೆ ಚಾಲ್ತ ಮತ್ತು ಮುಚ್ಚೀರಿಗೆ ಬಹಳ ಸಾಮ್ಯತೆ ಇದೆ. ಎಲೆಗಳ ಆಕಾರ ಒಂದೇ, ಆದರೆ ಚಾಲ್ತದವು ಸ್ವಲ್ಪ ಸಣ್ಣವು (ಚಿತ್ರ ಗಮನಿಸಿ). ಚಾಲ್ತದ ಸಣ್ಣ ಗಿಡಗಳು ಮುಚ್ಚೀರಿನಷ್ಟು ನೇರ,ಸುಂದರವಾಗಿ ಅಬ್ಬಾ! ಎನ್ನುವಂತೆ ಬೆಳೆಯುವುದಿಲ್ಲ. ಆದರೆ ಬೆಳೆದಂತೆ ಬೃಹತ್ ಮರ. ಚಾಲ್ತದ ಬಿಳಿಯಾದ ಹೂವು ಸಾಕಷ್ಟು ದೊಡ್ಡದು, ಅತಿ ಸುಂದರ. ಒಳಗೆ ನೂರಾರು ಹಳದಿ ಕೇಸರಗಳು. ಮಧ್ಯೆ ಚಕ್ರದಂತೆ ಅರಳಿ ನಿಂತ ಶಲಾಕಾಗ್ರ. ಚಾಲ್ತದ ಹಣ್ಣಿಗಂತೂ ದೊಡ್ಡ ಕ್ರಿಕೆಟ್ ಬಾಲಿನ ಗಾತ್ರ- ಆನೆ ಸೇಬು ಎನ್ನುವ ಹೆಸರು ಸಾರ್ಥಕ. ಹುಳಿಸಿಹಿ ರುಚಿಯಂತೆ. ಉತ್ತರಭಾರತದಲ್ಲಿ ಅಡಿಗೆ, ಉಪ್ಪಿನಕಾಯಿಗೆ ವ್ಯಾಪಕ ಬಳಕೆಯಿದೆ.
![]() |
ಚಾಲ್ತದ ಎಳೆಗಿಡ |
[ಮುಚ್ಚೀರಿನ ಗಿಡ ನನಗೆ ಚಾರ್ಮಾಡಿ ದಾರಿಯ ಬದಿಯಲ್ಲಿ ದೊರೆಯಿತು. ಚಾಲ್ತ ಸಿಗುವುದು ಕಡುಕಷ್ಟ. ಅದೃಷ್ಟವಶಾತ್ ನನಗೆ Infosys ಸಂಸ್ಥೆಯವರು ಒಂದು ಗಿಡವನ್ನು ಕೊಡುಗೆಯಾಗಿ ಕೊಟ್ಟರು. ಅವರಿಗೆ ನನ್ನ ವಂದನೆಗಳು. ಮುಚ್ಚೀರಿನ ಗಿಡ ತುಂಬ ಆತ್ಮವಿಶ್ವಾಸದಿಂದ 'ಸೊಕ್ಕಿ' ಬೆಳೆಯುತ್ತಿದೆ. ಚಾಲ್ತದ ವೇಗ ಸದ್ಯಕ್ಕೆ ಕಡಿಮೆ.]
ಡಾ ಶ್ರೀನಿವಾಸ್ ಶೇಂತಾರ್ ಅವರು ಹೀಗೆ ಹೇಳಿದ್ದಾರೆ.
ReplyDeleteDillenia pentagyna ಅಂತ ಇದರ ಸಹೋದರ ಸಸ್ಯ ಇದೆ, ಅದರ ಕಾಯಿ ಗಳು ನೆಲ್ಲಿ ಗಾತ್ರವಿದ್ದು ತಿನ್ನಲು ಯೋಗ್ಯವಾದ ವು.(ಮುಚ್ಚಿರೆ ಅದು ಇರಬಹುದು)
Dillenia indica ವು ದೊಡ್ಡ ಹಣ್ಣು..ಸುಲಿದ ತೆಂಗಿನಕಾಯಿ ಗಾತ್ರ.
ಚಾಲ್ತ ಅಂದರೆ ಇದುವೆ ಹೌದು.