About / ನನ್ನ ಬಗ್ಗೆ

ನಾನು ದಕ್ಷಿಣ ಕನ್ನಡದ ಕೃಷಿಮನೆಯಲ್ಲಿ ವಾಸಿಸುತ್ತಿರುವ ಸಂಸಾರಿ ಕೃಷಿಕ. ವೃತ್ತಿಯಲ್ಲಿ ಇಂಜಿನಿಯರ್ ಮತ್ತು ನಗರ ವೃತ್ತಿಯನ್ನೂ ನಡೆಸುತ್ತಿದ್ದೇನೆ. ಪತ್ನಿ, ತಂದೆ ತಾಯಿ, ಅಜ್ಜಿ, ಅಣ್ಣ ಅತ್ತಿಗೆ, ಒಟ್ಟಾಗಿ ಮೂವರು ಮಕ್ಕಳು ಸೇರಿದ ಕೂಡುಕುಟುಂಬ ನಮ್ಮದು . ಬೆಂಗಳೂರು ವಿದೇಶಗಳನ್ನೆಲ್ಲ ಸ್ವಲ್ಪ ನೋಡಿ, ನಮ್ಮ ವೈಯಕ್ತಿಕ ಅಸ್ತಿತ್ವಕ್ಕೆ ಬೆಲೆಯಿಲ್ಲದ, ನಮ್ಮ ಶ್ರಮವನ್ನಷ್ಟೇ ದೂರದೇಶಕ್ಕೆ ಮಾರುವ ಪ್ರಕೃತಿಭಂಜಕ ಆರ್ಥಿಕ ವ್ಯವಸ್ಥೆಯಲ್ಲಿ ದಶಕಕ್ಕೂ ಮಿಕ್ಕಿ ಕೆಲಸ ಮಾಡಿದ್ದೇನೆ ಮತ್ತು ಅದರ ಬಗ್ಗೆ ಬಹು ವಿಸ್ತಾರವಾದ ಭಿನ್ನಾಭಿಪ್ರಾಯವನ್ನು ಹೊಂದಿದ್ದೇನೆ. ಈ ಅನುಭವವು ನನಗೆ ಒಂದು ರೀತಿಯಲ್ಲಿ ಒಳಿತನ್ನು ಮಾಡಿದೆ. ನನ್ನ ಹುಟ್ಟೂರು, ಕೃಷಿಮನೆ, ಹಟ್ಟಿ, ನಮ್ಮ ಭೂಮಿಯಲ್ಲಿರುವ ಕಾಡು, ಕೆರೆಗಳು, ವನ್ಯಜೀವಿಗಳು ಸೇರಿದ ಹಳ್ಳಿಯ ಸ್ವಾಯತ್ತ, ಶ್ರಮ ಸಹಿತ ಜೀವನಾಧಾರ ಕೃಷಿವ್ಯವಸ್ಥೆಯ ಬಗ್ಗೆ ಅಪಾರ ಗೌರವವನ್ನು ನನ್ನಲ್ಲಿ ಬೆಳೆಸಿಕೊಟ್ಟಿದೆ. ಅದನ್ನು ಹಿಂಬಾಲಿಸಿ ಮತ್ತೆ ಊರಿಗೆ ಮರಳಿ ನನ್ನೊಂದು ಕಾಲನ್ನು ಕೃಷಿಯಲ್ಲಿ ದೃಢವಾಗಿ ಊರಿದ್ದೇನೆ. ನನ್ನ ಭೂಮಿಯ ಪರಿಧಿಯೊಳಗಿನಿಂದ ಪ್ರಕೃತೀ ಸತ್ಯವನ್ನು ಅಧ್ಯಯನ ಮಾಡುವುದು ನನ್ನ ಹವ್ಯಾಸ, ಒಂದು ರೀತಿಯಲ್ಲಿ ಬಾವಿಯೊಳಗಿನ ಕಪ್ಪೆ ಸಾಗರವನ್ನು ಅಧ್ಯಯನ ಮಾಡಿದಂತೆ. ಆದರೆ ಇದು ಸಾಧ್ಯ ಎಂದು ನಾನು ನಂಬಿದ್ದೇನೆ. ಹಿಂದೆ ಶಾಲೆ ಕಾಲೇಜು ಪರೀಕ್ಷೆಗಳಿಗಾಗಷ್ಟೇ ಓದಿದ್ದ ಜೀವಶಾಸ್ತ್ರವನ್ನು