ವಿಜಯವಾಣಿಯ ದಿನಗಳಿಂದ ಶ್ರೀ ಸೂರ್ಯಪ್ರಕಾಶ ಪಂಡಿತ್ ಅವರ ಲೇಖನಗಳನ್ನು ಸಿಕ್ಕಿದಾಗ ಓದಿ , ಕೆಲವನ್ನು ಕತ್ತರಿಸಿ ಇಟ್ಟುಕೊಂಡಿದ್ದೇನೆ . ಅವರ ಬರಹಗಳ ಬಗ್ಗೆ ಹೆಚ್ಚು ವಿವರವಾಗಿ ಬರೆಯುವ / ವಿಮರ್ಶಿಸುವ ಶಕ್ತಿ , ಓದು ಮತ್ತು ಜ್ಞಾನವ್ಯಾಪ್ತಿಯು ನನಗೆ ಇಲ್ಲ . ಆದರೆ ಈ ಪುಸ್ತಕದಲ್ಲಿ ಅವರು ಒತ್ತು ನೀಡಿರುವ ಕೆಲವು ವಿಚಾರಗಳು ನಾನು ನಂಬಿದ ಮತ್ತು ಇತ್ತೀಚೆಗೆ ‘IT ಯಿಂದ ಮೇಟಿಗೆ ’ ಯಲ್ಲಿ ಪ್ರಸ್ತಾಪಿಸಿದ ವಿಷಯಗಳಿಗೆ ತಾಳೆಯಾಗುತ್ತಿರುವುದು ನನಗೆ ವಿಶೇಷ ಸಂತೋಷವನ್ನು ಉಂಟುಮಾಡಿವೆ . ‘ ಜೀವನವದೊಂದು ಕಲೆ ’ ಪುಸ್ತಕದ ಪುಟ ೨೮ರಲ್ಲಿ ಜಗತ್ತು ಒಳ್ಳೆಯದೋ ಕೆಟ್ಟುದೋ ಎಂಬ ಪ್ರಶ್ನೆಯೇ ಅಪ್ರಸ್ತುತ ಎಂಬ ವಿಷಯವನ್ನು ಅವರು ಪ್ರಸ್ತಾಪಿಸಿದ್ದಾರೆ . ನಾನು ನನ್ನ ಐಟಿ ವೃತ್ತಿಯಿಂದ ಕೃಷಿಗೆ ಬದಲಾವಣೆ ಮಾಡುವುದೇ ಸರಿ ಎಂಬ ಸಮರ್ಥನೆಯ ಅನ್ವೇಷಣೆಯಲ್ಲಿದ್ದಾಗ ಈ ಸಮಸ್ಯೆಯಿಂದ ಬಳಲಿದ್ದುಂಟು , ಏಕೆಂದರೆ ಕಾರಣವಿಲ್ಲದೆ ವೃತ್ತಿಯನ್ನು ಬದಲಾಯಿಸುವ ಹಪಾಹಪಿ ಯಾರಿಗೂ ಇರುವುದಿಲ್ಲವಷ್ಟೆ ?. ಪ್ರಯಾಗ್ ಜೋಷಿ ಎಂಬವರು ಹಿಂದೂ ಪತ್ರಿಕೆಯಲ್ಲಿ ‘ ವೃತ್ತಿಜೀವನದ ಸರಿತಪ್ಪುಗಳು ’ ಎಂದೊಂದು ಲೇಖನವನ್ನು ಬಹಳ ಹಿಂದೆ ಬರೆದಿದ್ದರು . ನಾನು ಇಷ್ಟಪಟ್ಟ ಲೇಖನಗಳಲ್ಲಿ ಅದು ಒಂದಾಗಿತ್ತು ( ಸಾಧ್ಯವಾದರೆ ಆ ಲೇಖನವನ್ನೊಮ್ಮೆ ಓದಿ ಈ ಬರಹದ ಓದನ್ನು